ಮಾತೃಛಾಯಾ

ನಾವು ಜನವರಿ 27, 2011 ಭೇಟಿ ನೀಡಿದ್ದು ಬೆಂಗಳೂರಿನ ಮಾತೃಛಾಯಾ ಎಂಬಸಂಸ್ಥೆಗೆ. ಇಲ್ಲಿ ತಾಯಿ-ತಂದೆ ಇಲ್ಲದ ಮಕ್ಕಳನ್ನು ದತ್ತು ಕೊಡಿಸುವ ಕೆಲಸಮಾಡುತ್ತಾರೆ ಮತ್ತು ವಯಸ್ಸಾದವರಿಗೆ ವೃದ್ದಆಶ್ರಮದ ಸೌಕರ್ಯವೂ ಇದೆ. ಇಲ್ಲಿಒಟ್ಟು 6 ಮಕ್ಕಳು ಇದ್ದಾರೆ, ಅದರಲ್ಲಿ 4 ಏಳೇಮಕ್ಕಳು ಜೀವನ್, ವಿನೋದ, ಸಂಜನಾ, ಮಮತಾ ಹಾಗು 2 ನಾಲ್ಕು ವರ್ಷದ ಮಕ್ಕಳು ರಾಧಿಕಾ ಮತ್ತು ಮಂಜುಇದ್ದಾರೆ. ಇಲ್ಲಿರುವವರು ಇವರನ್ನು ಬಹಳ ಪ್ರೀತಿಯಿಂದ, ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.

ನಾವು ಮಕ್ಕಳಿಗಾಗಿ ತೆಗೆದುಕೊಂಡು ಹೋಗಿದ್ದ ಡೈಪರ್ಸ್,ಮಿಲ್ಕ್-ಪೌಡರ್ ಮತ್ತುಪುಟ್ಟ ಮಕ್ಕಳಿಗೆ ಸ್ವಲ್ಪ ತಿಂಡಿ ಕೊಟ್ಟೆವು. ರತ್ನರವರು ನಮಗೆ ಮಕ್ಕಳು ಹಾಗುವೃದ್ದಆಶ್ರಮವನ್ನು ತೋರಿಸಿದರು. ಇಲ್ಲಿ ವಿಕಲಚೇತನರಿಗೆ ಪುಸ್ತಕಗಳನ್ನುತಯಾರಿಸುವರನ್ನು ಭೇಟಿ ಮಾಡಿದೆವು.

ನಿಜವಾಗಲು ಒಳ್ಳೆ ಕೆಲಸಗಳನ್ನು ಮಾಡುತಿರುವ ಮಾತೃಛಾಯಾ ಸಂಸ್ಥೆ ಇನ್ನುಎತರಕ್ಕೆ ಬೆಳೆದು ಇಂತಹ ಮಕ್ಕಳ ಬಾಳಿಗೆ ದಾರಿ-ದೀಪವಾಗಲಿ. ಈ ಎಲ್ಲ ಮಕ್ಕಳಬದುಕು ಸಂತೋಷವಾಗಿ, ಸುಖವಾಗಿ ಇರಲೆಂದು ನಾವು ತುಂಬು ಹೃದಯದಿಂದಆಶಿಸುತ್ತೇವೆ.

- ಓ ನನ್ನ ಚೇತನಾ