ಅನಾಥಶಿಶು ನಿವಾಸ

ನಾವು ಜನವರಿ 2011 ರಂದು ಭೇಟಿ ನೀಡಿದ್ದು ಬೆಂಗಳೂರಿನ ಅನಾಥ ಶಿಶು ನಿವಾಸಎಂಬ ಸಂಸ್ಥೆಗೆ. ಇಲ್ಲಿ ಸುಮಾರು 70 ಮಕ್ಕಳು ಇದ್ದಾರೆ. ತಾಯಿ ಅಥವಾ ತಂದೆಇರುವ ಮಕ್ಕಳಿಗೆ ಅನಾಥ ಶಿಶು ನಿವಾಸ ಆಶ್ರೆಯ ನೀಡಿದೆ. ಇಲ್ಲಿ ಪುಟ್ಟ ಮಕ್ಕಳಿಂದ 10 ನೇ ತರಗತಿ ಓದುವ ಮಕ್ಕಳವರೆಗೂ ಇದ್ದಾರೆ. ನಾವು 2-3 ಬಾರಿ ಬೀಟಿನೀಡಿದಾಗ ಅಕ್ಕಿ,ಬೇಳೆ, ಕಾಯಿ - ಪಲ್ಯ ತೆಗೆದುಕೊಂಡು ಹೋಗಿದ್ದೆವು. ಇಲ್ಲಿ ವೇಳಪಟ್ಟಿ ಪ್ರಕಾರವೇ ಊಟ-ತಿಂಡಿ, ಆಟ-ಪಾಠ ಎಲ್ಲವೂ ಶಿಸ್ತಿನಿಂದ ಪಾಲಿಸುತ್ತಾರೆ .

ಸರ್ವೇ ಭವಂತು ಸುಖಿನಃ

ಸರ್ವೇ ಸಂತು ನಿರಾಮಯಃ

ಸರ್ವೇ ಭದ್ರಾಣಿ ಪಶ್ಯಂತು

ಮಾಕಶ್ಚಿತ್ ದುಃಖ ಭಾಧ್ಬವೆ ||

ಎಂದು ಮಕ್ಕಳು ಊಟ ತಿಂಡಿಗೆ ಮೂದಲು ಪ್ರಾರ್ಥಿಸುತ್ತಾರೆ. ಹೀಗೆ ಇಲ್ಲಿನ ಎಲ್ಲ ಮಕ್ಕಳ ಜೀವನವು ಸಂತೋಷವಾಗಿ,ನಿರಾತಂಕವಾಗಿರಲಿ ಮತ್ತು ವಿದ್ಯೆ, ಆರೋಗ್ಯಎಲ್ಲವನ್ನು ಕೊಟ್ಟು ಸದಾ ಸುಖವಾಗಿ ಇರಲೆಂದು ತುಂಬು ಹೃದಯದಿಂದಆಶಿಸುತ್ತೇವೆ.

- ಓ ನನ್ನ ಚೇತನಾ